ವ್ಯಕ್ತಿ - ವ್ಯಕ್ತಿತ್ವ ವಿವರ

ಕ್ಯಾತನಹಳ್ಳಿ ರಾಮಣ್ಣ (1942)

ತಂದೆದಾಸೇಗೌಡ
ತಾಯಿಮಾದಮ್ಮ
ಹುಟ್ಟಿದ ಸ್ಥಳಕ್ಯಾತನಹಳ್ಳಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ
ವಿದ್ಯಾಭ್ಯಾಸಪ್ರಾಥಮಿಕ ಶಾಲೆ – ಕ್ಯಾತನಹಳ್ಳಿ
ಪ್ರೌಢಶಾಲೆ,- ಪಾಂಡವಪುರ
ಪಿಯುಸಿ,- ಸೆಯಿಚಿಟ್ ಫಿಲೋಮಿನ ಕಾಲೇಜು, ಮೈಸೂರು
ಬಿ.ಎ. (1968),- ಮಹಾರಾಜ ಕಾಲೇಜು, ಮೈಸೂರು
ಎಂ.ಎ. (1971) – ಕನ್ನಡ ಆಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು
ಬೋಧನಾನುಭವಐದು ವರ್ಷ
ಉದ್ಯೋಗ24.12.1971 ರಿಂದ 31.08.2000ರವರೆಗೆ ಸಂಶೋಧನ ಸಹಾಯಕನಾಗಿ


ಶ್ರೀಯುತ ಕ್ಯಾತನಹಳ್ಳಿ ರಾಮಣ್ಣನವರು ಮಂಡ್ಯ ಜಿಲ್ಲೆಯ ಪ್ರಬುದ್ಧ ಜಾನಪದ ವಿದ್ವಾಂಸರು. ತಮ್ಮ ಕ್ಷೇತ್ರದಲ್ಲಿ ಜ್ಞಾನ ಸಂಪತ್ತನ್ನು ಸಂಪನ್ನಗೊಳಿಸಿಕೊಂಡಿರುವ ಇವರು ಎಲೆ ಮರೆಯ ಕಾಯಿಯಂತೆ ತಮ್ಮ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸರಿ ಸುಮಾರು 29 ವರ್ಷಗಳಿಗೂ ಮೀರಿ ಕನ್ನಡ ಸಾಹಿತ್ಯ ಮತ್ತು ಜಾನಪದ ವಿಷಯಗಳನ್ನಾಧರಿಸಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಕನ್ನಡದ ಕಿಟ್ಟೆಲ್ ಎಂದೂ ಕರೆಸಿಕೊಂಡಿರುವ ಇವರು ಬರವಣಿಗೆಯ ಶೈಲಿಯಲ್ಲಿ, ವಿಚಾರಗಳಲ್ಲಿ ತಮ್ಮದೇ ಆದ ಛಾಪನ್ನು ಹೊಂದಿರುವುದು ಅವರ ಪಾಂಡಿತ್ಯಕ್ಕೆ, ಸೃಜನಶೀಲತೆಗೆ ಒಂದು ಸಾಕ್ಷಿ.


ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ದಾಸೇಗೌಡ ಮತ್ತು ಮಾದಮ್ಮ ದಂಪತಿಗಳ ಕಿರಿಯ ಪುತ್ರರಾಗಿ 1972ರಲ್ಲಿ ಶ್ರೀಯುತರು ಜನಿಸಿದರು. ಅವರ ಪ್ರಾಥಮಿಕ ವಿದ್ಯಾಭ್ಯಾಸವು ಕ್ಯಾತನಹಳ್ಳಿಯಲ್ಲೂ, ಪ್ರೌಢಶಾಲಾಭ್ಯಾಸವು ಪಾಂಡವಪುರದಲ್ಲೂ, ಪಿ.ಯು. ವಿದ್ಯಾಭ್ಯಾಸವು ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲೂ, ಪದವಿ ಅಭ್ಯಾಸವು ಮೈಸೂರು ಮಹಾರಾಜ ಕಾಲೇಜಿನಲ್ಲೂ ಹಾಗೂ ಸ್ನಾತಕೋತ್ತರ ಪದವಿಯ ಅಭ್ಯಾಸವು ಮೈಸೂರು ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿಯೂ ನೆರವೇರಿತು.


ಮಿತ ಭಾಷಿಯೂ, ಭಾವುಕರೂ, ಸ್ವವಲಂಬಿತರೂ ಆದ ಶ್ರೀಯುತರ ವಿವಾಹವು 1973ರಲ್ಲಿ ಶ್ರೀಮತಿ ರುಕ್ಮಿಣಿ ಎಂ. ಅವರೊಡನೆ ಆಯಿತು. ಶ್ರೀಯುತ ಕ್ಯಾತನಹಳ್ಲಿ ರಾಮಣ್ಣ ಮತ್ತು ರುಕ್ಮಿಣಿ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು ಡಾ. ಕುಮುದಿನಿ ಅಚ್ಚಿ ಮತ್ತು ವಿದೂಷಿ. ಪದ್ಮಿನಿ ಅಚ್ಚಿ


ತಮ್ಮ ಹುಟ್ಟೂರು, ತಾಲ್ಲೂಕು ಮತ್ತು ಜಿಲ್ಲೆಯ ಬಗ್ಗೆ ಅಪಾರ ಪ್ರೀತಿ ಮತ್ತು ಬಾಂಧವ್ಯವನ್ನು ಹೊಂದಿರುವ ಇವರು ಜಿಲ್ಲೆಯ ಜನತೆ ತೋರುವ ಪ್ರೀತಿ, ಆದರಗಳಿಗೆ ಯಾವಾಗಲೂ ಭಾವುಕರಾಗಿ ಸ್ಪಂದಿಸುತ್ತಾರೆ.

No comments:

Post a Comment